St. Mary’s Island ಸೇಂಟ್ ಮೇರಿಸ್ ದ್ವೀಪದ ನಡುವೆ ಪ್ರವಾಸಿ ದೋಣಿ ಸೇವೆ ಪುನರಾರಂಭ

ಉಡುಪಿ, ಅಕ್ಟೋಬರ್ 24, 2023: ಕರಾವಳಿ ಪ್ರವಾಸೋದ್ಯಮ ಸೀಸನ್ ಚುರುಕಾಗಿದ್ದು, ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ಮಲ್ಪೆ ಮತ್ತು  St. Mary’s Island ಸೇಂಟ್ ಮೇರಿಸ್ ದ್ವೀಪದ ನಡುವೆ ಪ್ರವಾಸಿ ದೋಣಿ ಸೇವೆ ಪುನರಾರಂಭಗೊಂಡಿದೆ.

St. Mary’s ದ್ವೀಪಕ್ಕೆ ದೋಣಿ ಸೇವೆಗಳು ಮಲ್ಪೆ ಸೀ ವಾಕ್‌ನಿಂದ ಮತ್ತು ಮಲ್ಪೆ ಬೀಚ್‌ ತೀರದಿಂದ ಲಭ್ಯವಿರುತ್ತವೆ. ಅಕ್ಟೋಬರ್ 19 ರಂದು beach walk ಸಮುದ್ರ ನಡಿಗೆ ಕಡೆಯಿಂದ ದೋಣಿ ಸರ್ವೀಸ್ ಪ್ರಾರಂಭವಾದರೆ, ಅಕ್ಟೋಬರ್ 16 ರಂದು ಬೀಚ್‌ನಿಂದ ಪ್ರಾರಂಭವಾಯಿತು. ಮಲ್ಪೆ ಬೀಚ್‌ನಲ್ಲಿ ಜಲ ಕ್ರೀಡೆಗಳಿಗೂ ಅವಕಾಶ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ನೇತೃತ್ವದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ರಾಯಪ್ಪ ಅವರು ತಿಳಿಸಿದ್ದಾರೆ.

https://kannadadhvani.com/2023/10/25/st-marys-island-boatservice/

Comments